ರಾಕೆಫೆಲರ್, ಜಾನ್ ಡೇವಿಸನ್	
   1830 - 1937. ಅಮೆರಿಕದ ಖ್ಯಾತ ಕೈಗಾರಿಕೋದ್ಯಮಿ. ಲೋಕೋಪಕಾರಿ ಮತ್ತು ಮಹಾದಾನಿ. ಅಮೆರಿಕನ್ ತೈಲೋದ್ಯಮದಲ್ಲಿ ಮಹಾನ್‍ಕ್ರಾಂತಿಯನ್ನುಂಟುಮಾಡಿದ ಸ್ಟ್ಯಾಂಡರ್ಡ್ ಆಯಿಲ್ ಕಂಪೆನಿಯ ಸ್ಥಾಪಕ. 1839  ಜುಲೈ 8 ರಂದು ರಿಚ್‍ಪೋರ್ಡ್ (ಎನ್. ವೈ) ಎಂಬಲ್ಲಿ ಜನಿಸಿದ. ತಂದೆ ಚಿಕ್ಕ ವ್ಯಾಪಾರಿ. ಆತ 1853 ರಲ್ಲಿ ಕುಟುಂಬಸಮೇತ ಕ್ಲೀವ್‍ಲೆಂಡಿನಲ್ಲಿ ನೆಲೆನಿಂತ. ತಾಕೆಫೆಲರ್ 1859 ರಲ್ಲಿ ಎಂ. ಬಿ. ಕ್ಲಾರ್ಕ್ ಎಂಬಾತನೊಡನೆ ಉತ್ಪಾದನೆ ಹಾಗು ಕಮಿಷನ್ ಉದ್ಯೋಗದಲ್ಲಿ ಪಾಲುದಾರನಾದ. 1860 ರ ಪ್ರಥಮದಲ್ಲಿ ಪೆನ್ಸಿಲ್‍ನೇನಿಯದ ವಾಯವ್ಯದಲ್ಲಿ ಅಮೆರಿಕ ಪ್ರಥಮವಾಗಿ ಎಣ್ಣೆಬಾವಿ ತೋಡಿದಾಗ ಭವಿಷ್ಯದಲ್ಲಿ ಅದರ ವಾಪಾರಿ ಆದ್ಯತೆಯನ್ನು ಗಮನಿಸಿದ ಈತ 1863 ರಲ್ಲಿ ಕ್ಲೀವ್‍ಲೆಂಡ್‍ನಲ್ಲಿ ತೈಲಶೋಧಾಗಾರ ಸ್ಥಾಪಿಸಿದ. ಅದೇ ವರ್ಷ ಅಂಡ್ರೂಸ್, `ಕ್ಲಾರ್ಕ್ ಅಂಡ್ ಕಂಪೆನಿ` ಯನ್ನು ಸ್ಥಾಪಿಸಿ ಆ ಮೂಲಕ (1841 - 1922) ಜೊತೆಗೂಡಿ ಕ್ಲೀವ್‍ಲೆಂಡಿನಲ್ಲಿ ಎರಡನೆಯ ತೈಲ ಸಂಸ್ಕರಣ ಕೇಂದ್ರವಾಗಿ `ವಿಲಿಯಮ್ ರಾಕೆಫೆಲರ್ ಅಂಡ್ ಕಂಪೆನಿ` ಸ್ಥಾಪಿಸಿದ.

ಕ್ಲೀವ್‍ಲೆಂಡ್‍ನ ಎರಡೂ ತೈಲ ಸಂಸ್ಕರಣ ಕೇಂದ್ರಗಳನ್ನು ಸಂಯೋಜಿಸಿ 1867 ರಲ್ಲಿ ರಾಕೆಫೆಲರ್ ಅಂಡ್ರೂಸ್, ಪ್ಲಾಗರ್ ಅಂಡ್ ಕಂಪನಿ ಎಂಬ ಪಾಲುದಾರಿಕೆ ಸಂಸ್ಥೆಯನ್ನು ಸ್ಥಾಪಿಸಲಾಯಿತು.  ಕ್ರಮೇಣ ತನ್ನ ಬುದ್ಧಿವಂತಿಕೆ ಹಾಗೂ ಪರಿಶ್ರಮದಿಂದ ತೈಲೋದ್ಯಮದಲ್ಲಿ ತಮಗೆ ಪ್ರತಿಸ್ಪರ್ಧಿಗಳೇ ಇಲ್ಲದಂತೆ ಮಾಡಿದ. ನ್ಯೂಜೆರ್ಸಿಯಲ್ಲಿ ಒಹಾಯೊ ಸ್ಟಾಂಡರ್ಡ್ ಆಯಿಲ್ ಕಂಪೆನಿಯನ್ನು ಸ್ಥಾಪಿಸಿ 1870 ರಲ್ಲಿ ರಾಕೆಫೆಲರ್ ಅದರ ಅಧ್ಯಕ್ಷನಾಗಿ ತೈಲೋದ್ಯಮವನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಂಡು ತೈಲದೊರೆ ಎನಿಸಿಕೊಂಡ. ದೇಶದ ಶೇ. 95 ಭಾಗ ತೈಲೋದ್ಯಮವನ್ನು ನಿಯಂತ್ರಿಸಿದ ಸ್ಟ್ರಾಂಡರ್ಡ್ ಆಯಿಲ್ ಟ್ರಸ್ಟ್‍ನ್ನು ವಾಹನಸಾಗಾಣೆ ಮತ್ತಿತರ ಉದ್ಯಮಗಳಲ್ಲಿ ಹೇರಳ ಹಣ ಸಂಪಾದಿಸಿದ. 1895 ರಲ್ಲಿ ಕಂಪೆನಿಯ ಅಧ್ಯಕ್ಷ ಪದವಿಯಿಂದ ನಿವೃತ್ತನಾದ.
ರಾಕೆಫೆಲರ್ ಸ್ಥಾಪಿಸಿದ ಸ್ಟಾಂಡರ್ಡ್ ಆಯಿಲ್ ಟ್ರಸ್ಟ್ ಶೇರ್ಮಾನ್ - ಅಂಟಿ ಟ್ರಸ್ಟ್ ಕಾಯ್ದೆಯ ಉಲ್ಲಂಘನೆ ಎಂದು 1982 ರಲ್ಲಿ ಒಹಾಯೊದಲ್ಲಿ ಸುಪ್ರೋಕೋರ್ಟು ನಿರ್ಧರಿಸಿತು. ಅದಕ್ಕೆ ಬದಲಾಗಿ ಸ್ಥಾಪಿತವಾದ ನ್ಯೂಜೆರ್ಸಿಯ ಸ್ಟಾಂಡರ್ಡ್ ಆಯಿಲ್ ಕಂಪೆನಿ 1911 ರ ವರೆಗೆ ಅಸ್ತಿತ್ವದಲ್ಲಿತ್ತು. ಅದೂ ಕೂಡ ನ್ಯಾಯವಿರುದ್ಧವಾದುದೆಂದು ಅಮೆರಿಕ ಸಂಯುಕ್ತಸಂಸ್ಥಾನಗಳ ಸುಪ್ರೀಂಕೊರ್ಟು ಘೋಷಿಸಿತು.  ಅಷ್ಟರಲ್ಲಿ ರಾಕೆಫೆಲರ್ ಸಕ್ರಿಯ ಉದ್ಯೋಗದಿಂದ ನಿವೃತ್ತನಾಗಿದ್ದ.

ತೈಲವ್ಯಾಪಾರದಿಂದ ಅಪಾರ ಧನಗಳಿಸಿ ಲೋಕವಿಕ್ಯಾತನಾದ ಈತ ಅರ್ಜಿಸಿದ ಧನವನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಲು ನಿರ್ಧರಿಸಿ ಅದಕ್ಕಾಗಿ ಧರ್ಮಸಂಸ್ಥೆಗಳನ್ನು ಸ್ಥಾಪಿಸಿದ. ಅವುಗಳಿಗೆ ಧರ್ಮದರ್ಶಿಗಳನ್ನೂ ಅಧಿಕಾರಿಗಳನ್ನೂ ನೇಮಿಸಿದ. ಸಾರ್ವಜನಿಕ ಸೇವೆಗಾಗಿ ರಾಕೆಫೆಲರ್ ನೀಡಿದ ಧನಹಾಯದಿಂದ ಷಿಕಾಗೋ ವಿಶ್ವವಿದ್ಯಾಲಯದ ಸ್ಥಾಪನೆಯಾಯಿತು. ಷಿಕಾಗೋ ವಿಶ್ವವಿದ್ಯಾಲಯಕ್ಕೆ ಈತ ವಿದ್ಯಾ ಸಂಸ್ಥೆ, ವಿಶ್ವವಿದ್ಯಾಲಯ, ಆರೋಗ್ಯ ಸಂಸ್ಥೆಗಳಿಗೆ ಈತ ವಿಶೇಷವಾಗಿ ಧನಸಹಾಯ ನೀಡಿ ಲೋಕೋಪಕಾರಿ ಎಂಬ ಕೀರ್ತಿಗಳಿಸಿದ.
ಈತನ ಏಕೈಕ ಪುತ್ರ ಜೂನಿಯರ್ ರಾಕೆಫೆಲರ್ ಜೊತೆಗೂಡಿ 60 ಕೋಟಿಡಾಲರ್ ಮೊತ್ತವನ್ನು ವೈದ್ಯಕೀಯ ಸಂಶೋಧನ ಸಂಸ್ಥೆ, ಸಾಮಾನ್ಯ ಶಿಕ್ಷಣ ಮಂಡಳಿ, ರಾಕೆಫೆಲರ್ ಪ್ರತಿಷ್ಠಾನ. ಲಾರಾ ವೆಲ್‍ಮನ್ ರಾಕೆಫೆಲರ್ ಸ್ಮಾರಕ ಸಂಸ್ಥೆ - ಇವುಗಳನ್ನು ಸ್ಥಾಪಿಸಿದ. ನ್ಯೂಯಾರ್ಕ್‍ನಲ್ಲಿ ಸ್ಥಾಪಿಸಿರುವ ರಾಕೆಫೆಲರ್ ಕೇಂದ್ರ ಜಗತ್ತಿನ ಹಲವೆಡೆಗಳಲ್ಲಿ ನಡೆಯುವ ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಈಗಲೂ ದೇಣಿಗೆ ನೀಡುತ್ತಿದೆ.

ರಾಕೆಫೆಲರ್ 1937 ಮೇ 23 ರಂದು ಆಮಂಡ್‍ಬೀಚ್‍ನ ತನ್ನ ನಿವಾಸದಲ್ಲಿ ನಿಧನನಾದ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		